ಯುದ್ಧ ಮತ್ತು ಶಾಂತಿ ಪ್ರಸಿದ್ಧ ರಷ್ಯನ್ ಸಾಹಿತಿ ಲಿಯೋ ಟಾಲ್ಸ್ಟಾಯ್ ರವರು ಬರೆದ ಒಂದು ಕಾದಂಬರಿ. ಇದು "ರಷ್ಯನ್ ಸಂದೇಶವಾಹಕ" ಎಂಬ ಪತ್ರಿಕೆಯಲ್ಲಿ ೧೮೬೫ ರಿಂದ ೧೮೬೯ ರ ವರೆಗೆ ಮೊದಲ ಬಾರಿ ಪ್ರಕಟವಾಯಿತು. "ಯುದ್ಧ ಮತ್ತು ಶಾಂತಿ" ಟಾಲ್ಸ್ಟಾಯ್ ರವರ ಎರಡು ಮಹಾಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ (ಇನ್ನೊಂದು ಅನ್ನಾ ಕರೆನೀನಾ). ಈ ಕಾದಂಬರಿ ನೆಪೋಲಿಯನ್ನನ ಕಾಲದ ರಷ್ಯನ್ ಸಮಾಜವನ್ನು ಕುರಿತದ್ದಾಗಿದೆ. ನೂರಾರು ಪಾತ್ರಗಳನ್ನು ಹೊಂದಿರುವುದು ಈ ಕಾದಂಬರಿಯ ವೈಶಿಷ್ಟ್ಯ. ಯುದ್ಧ, ಶಾಂತಿ, ಯೌವನ, ಮದುವೆ, ಮುದಿತನ, ಸಾವು ಮೊದಲಾದ ವಿಷಯಗಳನ್ನು ಈ ಕಾದಂಬರಿ ಚರ್ಚಿಸುತ್ತದೆ. ಯುದ್ಧ ಮತ್ತು ಶಾಂತಿ ಕಾದಂಬರಿಯನ್ನು ದೇ. ಜವರೇಗೌಡ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. == ಉಲ್ಲೇಖನಗಳು ==